Saturday 4 February 2012

Let it reach the 110 Crores Indians and the remaining if any. Kindly, share this valuable information wherever possible.

1. If you see children Begging anywhere in INDIA , please contact:
"RED SOCIETY" at 9940217816. They will help the children for their studies. 


2. 
Where you can search for any BLOOD GROUP, you will get thousand's of donor address.www.friendstosupport.org 

3. 
Engineering Students can register in www.campuscouncil.com to attend Off Campus for 40 Companies.

4. 
Free Education and Free hostel for Handicapped/Physically Challenged children.
Contact:- 09842062501 &09894067506.


5. 
If anyone met with fire accident or people born with problems in their ear, nose and mouth can get free PLASTIC SURGERY done by Kodaikanal PASAM Hospital .Everything is free. Contact : 045420-240668,245732
"Helping Hands are Better than Praying Lips" 


6. 
If you find any important documents like Driving license, Ration card, Passport, Bank Pass Book, etc., missed by someone, simply put them into any near by Post Boxes. They will automatically reach the owner and Fine will be collected from them. 

7. By the next 10 months, our earth will become 4 degrees hotter than what it is now. Our Himalayan glaciers are melting at rapid rate. So let all of us lend our hands to fight GLOBAL WARMING.
-Plant more Trees.
-Don't waste Water & Electricity.
-Don't use or burn Plastics 

8. It costs 38 Trillion dollars to create OXYGEN for 6 months for all Human beings on earth.
"TREES DO IT FOR FREE"
"Respect them and Save them"
 
9. Special phone number for Eye bank and Eye donation:04428281919 and 04428271616(Sankara Nethralaya Eye Bank). For More information about how to donate eyes plz visit these sites.
http://ruraleye.org/

10. Heart Surgery free of cost for children (0-10 yr) Sri Valli Baba Institute Banglore. 10.
Contact : 09916737471

11. 
Medicine for Blood Cancer!!!!
'Imitinef Mercilet' is a medicine which cures blood cancer. It is available free of cost at "Adyar Cancer Institute in Chennai". Create Awareness. It might help someone.
Cancer Institute in Adyar, Chennai
Category: Cancer
Address:
East Canal Bank Road , Gandhi Nagar
Adyar
Chennai -600020
Landmark: Near Michael School
Phone: 044-24910754 044-24910754 , 044-24911526 044-24911526 , 044-22350241 044-22350241 


12. 
Please CHECK WASTAGE OF FOOD
If you have a function/party at your home in India and food gets wasted, don't hesitate to call 1098 (only in India ) - Its not a Joke, This is the number of Child helpline.
They will come and collect the food. Please circulate this message which can help feed many children.
AND LETS TRY TO HELP INDIA BE A BETTER PLACE TO LIVE IN
Please Save Our Mother Nature for
"OUR FUTURE GENERATIONS" 


Please don't delete this without forwarding.
Let it reach the 110 Crores Indians and the remaining if any. 

"Spend at least as much time researching a stock as you would choosing a refrigerator" .

Sunday 1 January 2012

Urgently wanted - Maintenance Engineer

Dear Candidates,

Job Junction info Pvt Ltd is one of a Reputed HR Consulting Company located at Bangalore providing lots of Job opportunity in IT and NON IT Category. With the clients base of more the 900 in Bangalore, We provide A-Z JOBS on daily basis. Currently we are looking for a Maintenance Engineer one of our Reputed client.

Clients profile : Reputed Electrical Mfg Company

Post Name : Maintenance Engineer

Experience Required : 0 to 5 yrs.

Job Location : Bangalore

Salary Offered : Good Salary

Qualification Required BE / Diploma

Contact us at PH- 9845513973 Otherwise meet our counselor at our Victoria Road office directly.

NOTE: If this vacancy is not suitable for you or you are not interested, then please ignore this mail.

Address: Job Junction Info Pvt Ltd
UBC, 10/2 Victoriya Road
Near ( Garuda Mall / Life Style )
Next to Hyderabad Briyani, 3rd Building
Bangalore-47.

Saturday 12 November 2011

ಕೋಲಾರ ಅಂತರಗಂಗೆ ಬೆಟ್ಟದ ಮೇಲೆ ಅಣ್ಣ ಬಾಂಡ್


Loading
ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಕೋಲಾರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ, ದಕ್ಷಿಣದ ಕಾಶಿ ಎಂದೇ ಜನಜನಿತವಾಗಿರುವ ಅಂತರಗಂಗೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ 'ಅಣ್ಣ ಬಾಂಡ್' ಚಿತ್ರೀಕರಣ ಶುಕ್ರವಾರದಿಂದ (ನ.11) ಭರದಿಂದ ಸಾಗಿದೆ. ಕೋಲಾರ ನಗರದಿಂದ 4 ಕಿ.ಮೀ ದೂರದಲ್ಲಿರುವ ಶತಶೃಂಗ ಪರ್ವತ ಎಂದು ಕರೆಯುವ ಬೆಟ್ಟ ಶ್ರೇಣಿಯೇ ಅಂತರಗಂಗೆ. ಇಲ್ಲಿನ ತೇರಹಳ್ಳಿ ಬೆಟ್ಟ ಮೇಲೆ ಬಂಡೆಗಳ ಮೇಲೆ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಯಿತು. ರಂಗಾಯಣ ರಘು ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿದರು. ಪುನೀತ್ ರಾಜ್ ಕುಮಾರ್ ಬಂದ ಸುದ್ದಿ ತಿಳಿಯುತ್ತಿದ್ದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಬೆಟ್ಟ ಹತ್ತಿ ಬಂದರು. ತಮ್ಮ ನೆಚ್ಚಿನ ನಟನೊಂದಿಗೆ ಅಭಿಮಾನಿಗಳು ಫೋಟೋಗಳನ್ನು ತೆಗೆಸಿಕೊಂಡು ಸಂತಸಪಟ್ಟರು. ಸೂರಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ತೀವ್ರ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Tuesday 8 November 2011

ಗೋಲ್ಡನ್ ಸ್ಟಾರ್ ಗಣೇಶನ 'ಮದುವೆ ಮನೆ' ವಿಮರ್ಶೆ

My Great Web page
ಗೋಲ್ಡನ್ ಸ್ಟಾರ್ ಗಣೇಶ್ ಬಹುನಿರೀಕ್ಷೆಯ 'ಮದುವೆ ಮನೆ' ಚಿತ್ರ ಗಣೇಶೋತ್ಸವವಾಗಿದೆ. ಮತ್ತೊಂದು 'ಮುಂಗಾರು ಮಳೆ' ಗಾಗಿ ಕಾದಿದ್ದ ನಟ ಗಣೇಶ್, ಅವರ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಸಿಕ್ಕಿದ್ದು ಮದುವೆಯೂಟದ ಬದಲು ಗಣೇಶನ ಹಬ್ಬ. ಧಾರಾವಾಹಿ ನಿರ್ದೇಶನದ ಅನುಭವಿ ಸುನಿಲ್ ಕುಮಾರ್ ಸಿಂಗ್ 'ಮದುವೆ ಮನೆ' ಊಟವನ್ನು 'ಮಾಮೂಲಿ ಊಟ'ವನ್ನಾಗಿ ಮಾಡುವಲ್ಲಿ ಅಥವಾ 'ಗಣೇಶನ ಹಬ್ಬ' ಮಾಡುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ

ಇತ್ತೀಚಿನ ಕನ್ನಡ ಸಿನಿಮಾಗಳಲ್ಲಿ ಕಥೆ ಮಾಯವಾಗಿ ಕೇವಲ ಚಿತ್ರಕಥೆಯಿಂದ ಸಿನಿಮಾ ಆಗುತ್ತಿದೆ. ಅದು ಮದುವೆ ಮನೆಯಲ್ಲಿಯೂ ಮುಂದುವರಿದಿದೆ. ಚಿತ್ರಕಥೆಯನ್ನು ಸಾಕಷ್ಟು ಚೆನ್ನಾಗಿಯೇ ಮಾಡಿಕೊಂಡಿರುವ ನಿರ್ದೇಶಕರು, ಮಧ್ಯಂತರದವರೆಗೆ ಪ್ರೇಕ್ಷಕರಿಗೆ ಮನರಂಜನೆ ನೀಡುವುದರ ಜೊತೆಗೆ ನಿರೂಪಣೆಯಲ್ಲಿ ಗಟ್ಟಿತನ ಕಾಯ್ದುಕೊಂಡಿದ್ದಾರೆ. ಆದರೆ ಮಧ್ಯಂತರದ ನಂತರ ಒಂದೊಂದಾಗಿ ಬಂದೆರಗುವ ಅನಿರೀಕ್ಷಿತ ತಿರುವು ಹಾಗೂ ಫ್ಲಾಶ್ ಬ್ಯಾಕ್ ಗಳು ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುವುದರ ಜೊತೆಗೆ ನಿರೂಪಣೆಯಲ್ಲಿ ಗೊಂದಲ ಎದ್ದು ಕಾಣುವಂತಿದೆ.

ಚಿಕ್ಕ ಊರೊಂದನ್ನು ಪ್ರಪಂಚದ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ತಂಗಿ, ತನ್ನ ಒಳ್ಳೆಯ ಕೆಲಸಕ್ಕೆ ಪ್ರಶಸ್ತಿ ತೆಗೆದುಕೊಳ್ಳಲು ವಿದೇಶಕ್ಕೆ ಹೊರಟಿರುವಾಗ ಎಸಿಪಿ ದುಶ್ಯಂತನ ಗುಂಡಿಗೆ ಬಲಿಯಾಗುತ್ತಾಳೆ. ಅಣ್ಣ-ತಂಗಿಯ ಬಾಂಧವ್ಯದ ನಿರೂಪಣೆ ಚೆನ್ನಾಗಿದೆ. ಆತ ಪ್ರಸಿದ್ಧಿಯ ಹುಚ್ಚಿಗೆ ಬಿದ್ದು ಎನ್ ಕೌಂಟರ್ ಹೆಸರಿನಲ್ಲಿ ಅಮಾಯಕರನ್ನು ಕೊಲೆಮಾಡುತ್ತಿರುತ್ತಾನೆ. ಅದನ್ನು ಬಯಲಿಗೆಳೆಯುವ ಸಾಹಸ ಮಾಡಿದ ಪತ್ರಕರ್ತನೊಬ್ಬನನ್ನು ಸಾಯಿಸಿ ಪಾಪದ ಕೊಡವನ್ನು ತುಂಬಿಸಿಕೊಂಡಿರುತ್ತಾನೆ. ಅದೆಲ್ಲವನ್ನೂ ನಾಯಕ ತಿಳಿದುಕೊಂಡಿರುತ್ತಾನೆ.

ಅದೇ ವೇಳೆ ನಾಯಕನಿಗೆ, ದುಶ್ಯಂತ್ ಮದುವೆ ಆಗುತ್ತಿರುವ ವಿಷಯ ತಿಳಿದು ಬರುತ್ತದೆ. ಹೇಗಾದರೂ ಮಾಡಿ ಆ ಹುಡುಗಿಯನ್ನು ಕಾಪಾಡಿ ಎಸಿಪಿ ದುಶ್ಯಂತನನ್ನು ಮುಗಿಸಲು ಸಂಚು ಹೂಡುತ್ತಾನೆ. ಅದಕ್ಕಾಗಿ ಹೊರಟ ನಾಯಕ ಹೇಗೆ ಮದುವೆ ಮನೆಗೆ ಹೊರಟಿದ್ದ ಹುಡುಗಿ ಹಾಗೂ ಕುಟುಂಬವನ್ನು ಸೇರಿಕೊಳ್ಳುತ್ತಾನೆ. ಮುಂದೆ ಮದುವೆ ಮನೆ ಹೇಗೆ 'ನಾಟಕದ ವೇದಿಕೆ'ಯಾಗಿ ಬದಲಾಗುತ್ತದೆ. ಅಲ್ಲಿಂದ ಮುಂದಕ್ಕೆ ನಾಯಕ-ನಾಯಕಿ ಕಥೆ ಏನಾಗುತ್ತದೆ ಎಂಬುದನ್ನು ತೆರೆಯಮೇಲೆ ನೋಡಿ.

ನಿರ್ದೇಶಕ ಸುನೀಲ್ ಕುಮಾರ್ ಸಿಂಗ್ ಇನ್ನೂ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಮಧ್ಯಂತರದಲ್ಲಿಯೇ ಮದುವೆಯೂಟ ಖಾಲಿಯಾಗಿ ಆಮೇಲೆ ಕೈಗೆ ಸಿಕ್ಕಿದ್ದನ್ನು ಬಡಿಸಿದಂತಿದೆ ಸಿನಿಮಾ. ತಿರುವುಗಳನ್ನು ಹಾಗೂ ಫ್ಲಾಶ್ ಬ್ಯಾಕ್ ಗಳನ್ನು ಕೊನೆಯಲ್ಲಿಯೂ ಸರಿಯಾಗಿ ನಿರೂಪಿಸದಿದ್ದರೆ ಹೇಗೆ? ಅರ್ಜೆಂಟ್ ಅಡಿಗೆ ಮಾಡಿ ಮದುವೆ ಮನೆಯಲ್ಲಿ ಬಡಿಸಿದಂತಿದೆ. ಆದರೂ ಮೆಚ್ಚತಕ್ಕ ಅಂಶವೆಂದರೆ ಗೋಲ್ಡನ್ ಸ್ಟಾರ್ ಗಣೇಶ್ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆ.

ನಟನೆಯ ವಿಷಯದಲ್ಲಿ ಗಣೇಶ್ ಅಪ್ಪಟ ಗೋಲ್ಡ್. ಮದುವೆ ಮನೆ ಅನ್ನುವುದಕ್ಕಿಂತ ಗಣೇಶೋತ್ಸವ ಅನ್ನುವುದೇ ಸರಿ. ಪ್ರತಿಯೊಂದು ದೃಶ್ಯದಲ್ಲೂ ಮನಮುಟ್ಟುವ ಅಭಿನಯದ ಜೊತೆಗೆ ಸಂಭಾಷಣೆಗೆ ಸರಿಯಾದ ಬಾಡಿ ಲಾಂಗ್ವೇಜ್ ಗಮನಾರ್ಹವಾಗಿದೆ. ಸೋಲಿನಿಂದ ಹೊರಬರಲೇಬೇಕೆಂಬ ಅವರ ಶ್ರದ್ಧೆ ಪಾತ್ರಪೋಷಣೆಯಲ್ಲಿ ಎದ್ದು ಕಾಣುತ್ತದೆ. ಆದರೆ ನಾಯಕಿ ಶ್ರದ್ಧಾ ಮಾತ್ರ ಚೆಂದವೂ ಇಲ್ಲದ ಗೊಂಬೆ. ಕನಿಷ್ಟ ಕೋಪವನ್ನೂ ನಟಿಸಲಾಗದ ನಾಯಕಿಯಾಗಿ ಚಿತ್ರಕ್ಕೆ ಕಾಣಿಕೆ ನೀಡುವಲ್ಲಿ ವಿಫಲವಾಗಿದ್ದಾರೆ.

ಉಳಿದಂತೆ ಪೋಷಕವರ್ಗದಲ್ಲಿ ಎಲ್ಲರದೂ ಪಾತ್ರಕ್ಕೆ ಸರಿಯಾದ ಪೋಷಣೆ. ಶರಣ್ ಹಾಸ್ಯ, ಅಭಿನಯ ಸಿನಿಮಾಗೆ ಪ್ಲಸ್ ಪಾಯಿಂಟ್. ಈಗ ಚಿರಂತ್ ಆಗಿರುವ ದುಶ್ಯಂತ್ ಪಾತ್ರಧಾರಿ ಜುಗಾರಿ ಅವಿನಾಶ್, ಅಭಿನಯದಲ್ಲಿ ಇನ್ನೂ ಪಳಗಬೇಕು. ಉಳಿದಂತೆ ಸಂಗೀತ, ಸಾಹಿತ್ಯ ನಾರ್ಮಲ್. ಕ್ಯಾಮೆರಾ ಕೆಲಸ, ಸಂಕಲನ ಓಕೆ. ಒಳ್ಳೆಯ ಕಥೆ, ಚಿತ್ರಕಥೆ ಮಾಡಿಕೊಂಡು, ನಿರೂಪಣೆಯಲ್ಲಿ ಮಧ್ಯಂತರದ ನಂತರ ಗೊಂದಲ ಆಗಿರದಿದ್ದರೆ ಮದುವೆ ಮನೆ ಇನ್ನೊಂದು ಮುಂಗಾರು ಮಳೆ ಆಗಬಹುದಿತ್ತು. ಆದರೂ ಗಣೇಶ್ ಅಭಿಮಾನಿಗಳಿಗೆ ಮದುವೆ ಮನೆ ಊಟ ಭರ್ಜರಿಯಾಗಿದೆ. ಎಲ್ಲರೂ ಒಮ್ಮೆ ಗಣೇಶೋತ್ಸವ ನೋಡುವಂತಿದೆ.

ಚಿತ್ರ: ಮದುವೆ ಮನೆ
ನಿರ್ಮಾಪಕರು: ರುಹೀನ ರೆಹಮಾನ್
ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ: ಸುನಿಲ್ ಕುಮಾರ್ ಸಿಂಗ್
ತಾರಾಗಣ: ಗಣೇಶ್, ಶ್ರದ್ಧಾ ಆರ್ಯ, ಚಿರಂತ್ (ಜುಗಾರಿ ಅವಿನಾಶ್), ಶರಣ್, ತಬಲಾ ನಾಣಿ, ಅರವಿಂದ್, ಹನುಮಂತೇಗೌಡ, ಕೆ.ವಿ. ನಾಗೇಶ್ ಕುಮಾರ್ ಮುಂತಾದವರು
ಸಂಗೀತ: ಮಣಿಕಾಂತ್ ಕದ್ರಿ
ಛಾಯಾಗ್ರಹಣ: ಶೇಖರ್ ಚಂದ್ರ
ಸಂಕಲನ: ಪಿ. ಆರ್. ಸೌಂದರ್ ರಾಜ್

IS IT TRUE.........???????????...........must see


ಬಿಜೆಪಿಗೆ ಗುಡ್ ಬೈ ಹೇಳಿದ ಬಿ ಶ್ರೀರಾಮುಲು

ಬಳ್ಳಾರಿ, ನ 9: ಬುಧವಾರ ಬೆಳಗ್ಗೆ ಸಂಭವಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬಿ. ಶ್ರೀರಾಮುಲು ರಾಜೀನಾಮೆ ನೀಡಿದ್ದಾರೆ. ಬಳ್ಳಾರಿ ಗ್ರಾಮಾಂತರ ಮರುಚುನಾವಣೆಯಲ್ಲಿ ಶ್ರೀರಾಮುಲು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಲ್ಲಿ ನನಗೆ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ, ಇದು ಸ್ವಾಭಿಮಾನದ ಸಮರ ಎಂದು ಬಿಜೆಪಿಗೆ ಸವಾಲು ನೀಡಿದ್ದಾರೆ.

ಇಂದು (ನ 9) ಮಧ್ಯಾಹ್ನ 1.30 ಕ್ಕೆ ಶ್ರೀರಾಮುಲು ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಬಲಿಗರು ಮತ್ತು ಆಪ್ತರ ಸಲಹೆಯಂತೆ ಈ ನಿರ್ಧಾರಕ್ಕೆ ಬಂದಿದ್ದೇನೆ. ನಾನು ರಾಜಕೀಯವಾಗಿ ಈ ಮಟ್ಟಕ್ಕೆ ಬೆಳೆಯಲು ಜನಾರ್ಧನ ರೆಡ್ಡಿ ಕಾರಣ. ಜನತೆ ನನ್ನನ್ನು ಕೈಬಿಡುವುದಿಲ್ಲ, ಬಳ್ಳಾರಿ ಜನತೆ ನನ್ನನ್ನು ಭಾರೀ ಬಹುಮತದಿಂದ ಆರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ನಾಮಪತ್ರ ಸಲ್ಲಿಕೆಯ ಮುನ್ನ ಮೆರವಣಿಗೆ ನಡೆಸಲಿರುವ ಶ್ರೀರಾಮುಲು ನಗರದ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಕೌಲ್ ಬಜಾರ್ ದರ್ಗಾಕ್ಕೆ ಭೇಟಿ ನೀಡಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಇಲ್ಲದಿರುವುದು ಬೇಸರ ತಂದಿದೆ ಎಂದಿದ್ದಾರೆ. ಈ ಮಧ್ಯೆ ಬಳ್ಳಾರಿ ನಗರ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಶ್ರೀರಾಮುಲು ವಿರುದ್ದವಾಗಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬಾರದೆಂದು ಮನವಿ ಮಾಡಿದ್ದಾರೆ.